Showing posts with label religion. Show all posts
Showing posts with label religion. Show all posts
Thursday, October 20, 2011
ಐಶ್ವರ್ಯಾ ರೈ ನವಂಬರ್ ತಿಂಗಳಲ್ಲಿ ಯಾವ ದಿನಾಂಕ ಮಗುವಿಗೆ ಜನ್ಮ ನೀಡುತ್ತಾಳೆ? ಅದು ಹೆಣ್ಣೋ, ಗಂಡೋ? ಅಥವಾ ಅವಳಿಯೋ? ಐಶ್ವರ್ಯಾ ರೈಯ ಹೆರಿಗೆ ದಿನಾಂಕಕ್ಕೂ ಜನ ಬೆಟ್ಟಿಂಗ್ ಶುರುಮಾಡಿದ್ದಾರೆ! ಅಂದ ಹಾಗೆ ಐಶ್ವರ್ಯಾ ರೈ ಅಂದ್ರೆ ನಮ್ ತರಾನೇ ಇರುವ ಓರ್ವ ಹೆಣ್ಣು ಮಗಳು. ಮಿಸ್ ವರ್ಲ್ಡ್ ಪಟ್ಟ ಧರಿಸಿ, ಬಾಲಿವುಡ್ ನಲ್ಲಿ ಮಿಂಚಿ, ಹಾಲಿವುಡ್ ಗೂ ಹಾರಿ, ಬಿಗ್ ಬಿ ಬಚ್ಚನ್ ನ ಪುತ್ರ ಅಭಿಷೇಕ್ ಬಚ್ಚನ್ ರನ್ನು ವರಿಸಿದ ಕರುನಾಡ ಕುವರಿ. ಆಕೆ ಸೀನಿದ್ದು, ಕೆಮ್ಮಿದ್ದು, ನಕ್ಕಿದ್ದು ಎಲ್ಲವೂ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್! ಯಾಕೆಂದರೆ ಆಕೆ ಸೆಲೆಬ್ರಿಟಿ. ಅದೇ ವೇಳೆ ನಮ್ಮ ದೇಶದಲ್ಲಿ ಅದೆಷ್ಟೋ ಮಹಿಳೆಯರು ಹೆರಿಗೆಯ ವೇಳೆ ಸಾವನ್ನಪ್ಪುತ್ತಿದ್ದರೂ, ಅದೊಂದು ಚಿಕ್ಕ ಸುದ್ದಿಯಾಗಿ ಮಾರನೇ ದಿನಕ್ಕೆ ರದ್ದಿಯಾಗಿ ಬಿಡುತ್ತದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಟಿಆರ್ ಪಿ ಹೆಚ್ಚಿಸುವಲ್ಲಿ ನಿರತರಾಗಿರುವ ಸಮೂಹ ಮಾಧ್ಯಮಗಳು ಕೆಲವೊಮ್ಮೆ ಸತ್ಯಾವಸ್ಥೆಯನ್ನು ಮರೆತು ವರ್ತಿಸುತ್ತಿರುವುದು ನಿಜವಾಗಿಯೂ ಖೇದಕರ. ಇದೀಗ ಇಡೀ ಭರತ ಖಂಡವೇ ಐಶ್ವರ್ಯಾ ರೈ ಬಗ್ಗೆ ಮಾತನಾಡುತ್ತಿದೆ. ನವಂಬರ್ 1ರಂದು ಆಕೆಯ ಬರ್ತ್ ಡೇ. ಅದನ್ನು ಹೇಗೆ ಆಚರಿಸುತ್ತಾರೆ? ಅದೇ ತಿಂಗಳಲ್ಲಿ ಹೆರಿಗೆ ಬೇರೆ. ಮಗುವಿಗೆ ಯಾವ ಹೆಸರಿಡುತ್ತಾರೆ? ಹೀಗೆ ಚರ್ಚೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಈ ದೊಡ್ಡ ಸುದ್ದಿಗಳ ನಡುವೆ 39ರ ಹರೆಯದ ಇರೋಂ ಚಾನು ಶರ್ಮಿಳಾ ಎಂಬಾಕೆ ಅಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸುದ್ದಿ ಹೈಲೈಟೇ ಆಗುವುದಿಲ್ಲ. ಯಾಕೆಂದರೆ ಆಕೆ ಸಾಮಾನ್ಯ ಮಹಿಳೆ, ಸೆಲೆಬ್ರಿಟಿ ಅಲ್ಲವೇ ಅಲ್ಲ.
Subscribe to:
Posts (Atom)

